₹500 ನೋಟುಗಳ ಮೇಲೆ RBI ಹೊಸ ರೂಲ್ಸ್ ; ಪ್ರತಿಯೊಬ್ಬರು ತಿಳಿದುಕೊಳ್ಳಿ!

₹500 ನೋಟುಗಳ ( ₹500 notes) ಬಗ್ಗೆ ಆರ್.ಬಿ.ಐ(RBI) ಮಹತ್ವದ ತೀರ್ಪು.! ನೋಟು ಚಲಾವಣೆ ಮಾಡುವಾಗ ಜನರು ಈ ಸೂಚನೆಗಳನ್ನು ಪಾಲಿಸಲೇಬೇಕು.

ಭಾರತದಲ್ಲಿ(India) ಇಂದು ನಕಲಿ ನೋಟುಗಳ ಚಲಾವಣೆ ಹೆಚ್ಛಾಗಿದೆ. ಭಾರತದಲ್ಲಿ ನಕಲಿ ನೋಟುಗಳ ಚಲಾವಣೆ ಇದೆ. ಈ ಕುರಿತಂತೆ ಹಲವು ಕ್ರಮಗಳನ್ನು ಆರ್‌ಬಿಐ ಕೈಕೊಂಡರೂ ಕೂಡ ಸಂಪೂರ್ಣವಾಗಿ ನಕಲಿ ನೋಟು ಬಳಸುವುದನ್ನು ತಡೆಯಲು ಆಗುತ್ತಿಲ್ಲ. ಇನ್ನು ನಕಲಿ ನೋಟುಗಳ ಹಾವಳಿಯನ್ನು ತಡೆಯಲು ಇತ್ತೀಚಿಗೆ ಆರ್.ಬಿ.ಐ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತ್ತು. ಶೀಘ್ರದಲ್ಲಿ ಸಂಪೂರ್ಣವಾಗಿ ನಗದು ಹಣ ವಹಿವಾಟಿಗೆ ಬದಲಾಗಿ ಡಿಜಿಟಲ್ ಕರೆನ್ಸಿ ಬಳಸುವಂತೆ ನಾಗರೀಕರಿಗೆ ತಿಳಿಸಿತ್ತು. ಯಾಕೆಂದರೆ ಎಲ್ಲರೂ ಡಿಜಿಟಲ್ ಕರೆನ್ಸಿ(Digital currency) ಬಳಸಿದರೆ ನಕಲಿ ನೋಟುಗಳ ಹಾವಳಿಯನ್ನು ತಡೆಯಬಹುದು ಎಂದು ಆರ್.ಬಿ.ಐ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತ್ತು. ಇದೀಗ 500 ರೂ. ನೋಟುಗಳಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೋಟನೋಟುಗಳನ್ನು(Duplicate notes) ತಡೆಯಲು ಆರ್.ಬಿ.ಐ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಯಾವ ನಿಯಮಗಳನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ನಕಲಿ ಹಾವಳಿಗಳನ್ನು ತಡೆಯಬೇಕು ಹಾಗೂ ನಾಗರೀಕರಿಗೆ ಆಗುವ ಮೋಸವನ್ನು ತಡೆಯುವ ಉದ್ದೇಶದಿಂದ ಆರ್.ಬಿ.ಐ ಈ ತೀರ್ಮಾನವನ್ನು ತೆಗೆಡುಕೊಂಡಿದೆ.  ಇನ್ನು ಎಲ್ಲಾ ನೋಟುಗಳಲ್ಲೂ ಸುರಕ್ಷಿತಾ ವೈಶಿಷ್ಟ್ಯಗಳು ಇರತುತ್ತಾವೆ. ಅದೇ ರೀತಿಯಾಗಿ 500 ರೂ. ನೋಟಿನಲ್ಲಿ ಹಲವು ಸುರಕ್ಷತಾ ವೈಶಿಷ್ಟ್ಯಗಳಿವೆ.ನಾಗರೀಕರು ಈ ವೈಶಿಷ್ಟ್ಯಗಳನ್ನು ಗಮನಿಸಿದರೆ ಆಗುವ ಮೋಸದಿಂದ ಅವರನ್ನು ಅವರೇ ರಕ್ಷಿಸಿಕೊಳ್ಳಬಹುದು.

500 ರೂ. ನೋಟಿನಲ್ಲಿ ಹಲವು ಸುರಕ್ಷತಾ ವಿಧಗಳಿವೆ ಅವು ಯಾವುವು?:

ಮೊದಲಿಗೆ ಬಹಳ ಮುಖ್ಯವಾಗಿ ಒಂದು ವಿಶೇಷ  ಭದ್ರತಾ ದಾರ ಇದೆ. ಅಂದರೆ, 500 ರೂ. ನೋಟನ್ನು ಓರೆಯಾಗಿ ಹಿಡಿದಾಗ, ಹಸಿರು ಬಣ್ಣದ ದಾರ (Green thread) ನೀಲಿ(blue) ಬಣ್ಣಕ್ಕೆ ತಿರುಗುತ್ತದೆ. ಇನ್ನು,  500 ರೂ. ನೋಟನ್ನು ಬೆಳಕಿಗೆ ಹಿಡಿದಾಗ ಮಹಾತ್ಮ ಗಾಂಧೀಜಿಯವರ(Mahatma Gandhi) ವಾಟರ್‌ಮಾರ್ಕ್(Watermark) ಸ್ಪಷ್ಟವಾಗಿ ಕಾಣುತ್ತದೆ. 500 ಸಂಖ್ಯೆಯನ್ನು ವಿಶೇಷ ಶಾಖೆಯಿಂದ ಮುದ್ರಿಸಲಾಗಿದ್ದು, ಓರೆಯಾಗಿ ಹಿಡಿದರೆ ಸಂಖ್ಯೆಯ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. ಆರ್‌ಬಿಐ’, ‘ಭಾರತ್’, ‘ಇಂಡಿಯಾ’ ಮತ್ತು ‘100’ ಸಣ್ಣ ಅಕ್ಷರಗಳಲ್ಲಿ ಬರೆದಿರುತ್ತದೆ. ಹಾಗೂ ನಕಲಿ ನೋಟುಗಳಲ್ಲಿ ಈ ರೀತಿಯಾದ ಅಕ್ಷರವಿರುವುದಿಲ್ಲ ಇದ್ದರೂ ಕಳಪೆ ಗುಣಮಟ್ಟದ್ದಾಗಿರುತ್ತದೆ. ಈ ರೀತಿಯ ವೈಶಿಷ್ಟ್ಯಗಳು ಇದ್ದರೆ ಆ ನೋಟುಗಳು ಅಸಲಿ ನೋಟುಗಳು ಎಂದರ್ಥ.

ನಕಲಿ ನೋಟುಗಳ ಬಗ್ಗೆ ಎಚ್ಚರ:

ಇನ್ನು ನಕಲಿ ನೋಟುಗಳ ಬಗ್ಗೆ ಜನರು ಹೆಚ್ಚು ಎಚ್ಚರವಹಿಸಬೇಕು. ಅದರಲ್ಲೂ ವ್ವವಹಾರ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಜಾಗರೂಕನಾಗಿರಬೇಕು. ಒಂದು ವೇಳೆ ಎಚ್ಚರವಹಿಸಲಿಲ್ಲವೆಂದರೆ ನಷ್ಟ ಅನುಭವಿಸಬೇಕಾಗಬಹುದು. ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಒಳ್ಳೆಯ ಉದ್​ಯಮ(industry) ಮಾಡುತ್ತಿರುತ್ತಾರೆ.ಈ ವೇಳೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಯಾಮಾರಿದರೆ ಹಾಕಿರುವ ಭಂಡವಾಳವೆಲ್ಲ ಕೈ ತಪ್ಪಿ ಹೋಗಬಹುದು. ಆರ್.ಬಿ.ಐ(RBI) ತಿಳಿಸಿರುವ ಮೇಲಿನ ಎಲ್ಲಾ ಸುರಕ್ಷತಾ ವಿಧಗಳನ್ನು ಒಮ್​ಮೆಯಾದರೂ ನೋಡಿಕೊಳ್ಳುವುದು ಉತ್ತಮ. ನೇರ ನೇರ ನಗದು ವಹಿವಾಟನ್ನು ಹೆಚ್​ಚು ಬಳಸಬೇಡಿ. ಹಾಗೂ ಎಟಿಎಂನಿಂದ(ATM) ಹಣ ಪಡೆದಾಗಲೂ ಒಮ್ಮೆ ಅದನ್ನು ಗಮನಿಸಿ. ಎಟಿಎಂನಿಂದ ತೆಗೆದುಕೊಂಡ ಹಣದ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡು ಸಮಸ್ಯೆ ಬಂದರೆ ತಕ್ಷಣ ಬ್​ಯಾಂಕ್ ಗೆ(BANK) ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳಿ.   

ನಕಲಿ ನೋಟುಗಳನ್​ನು ಏನು ಮಾಡಬೇಕು?:

ಆರ್.ಬಿ.ಐ ಹಣಕಾಸಿನ ವಿಚಾರದಲ್ಲಿ ಜನರಿಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ. ಹಾಗೂ ಆರ್.ಬಿ.ಐ ನೀಡಿರುವ ಭದ್ರತಾ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಂಡು ಅನುಮಾನ ಬಂದರೆ ಅದರ ಬಗ್ಗೆ ವರದಿ ಮಾಡುವುದು ಪ್ರಿತಿಯೊಬ್ಬರ ಕರ್ತವ್ಯ. ಒಂದು ವೇಳೆ ನಕಲಿ ನೋಟುಗಳು ಸಿಕ್ಕರೆ, ಅವುಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ. ನಕಲಿ ನೋಟುಗಳು ಸಿಕ್ಕ ತಕ್ಷಣ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ತಿಳಿಸಿ. ನಿಮಗೆ ಆ ನೋಟು ಹೇಗೆ ಸಿಕ್ಕಿತು? ಯಾವ ಸಂದರ್ಭದಲ್​ಲಿ ಯಾರು ನಿಮಗೆ ಆ ನೋಟು ನೀಡಿದರು? ಎಂಬ ಮಾಹಿತಿಗಳನ್ನು ತಿಳಿಸಿ ಅಗತ್ಯ ದಾಖಲೆಗಳನ್ನು ನೀಡಬೇಕು. ಹಾಗೂ ಬಹಳ ಮುಖ್ಯವಾಗಿ ಬ್​ಯಾಂಕ್ ನವರು ನಕಲಿ ನೋಟುಗಳನ್ನು ಪರಿಶೀಲಿಸಿ, ನಾಗರೀಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು. 

ಗಮನಿಸಿ :

ಜನರು ನೋಟಿನ ಮೇಲೆ ಏನನ್ನು ಬರೆಯಬಾರದು ಹಾಗೂ ಅಂಟಿಸಬಾರದು. ನೋಟನ್ನು ಮಡಚಿ ಅಥವಾ ಹೊಲೆಯಬಾರದು ಹಾಗೂ ಬಿಸಿಲು ಅಥವಾ ಶಾಖದಿಂದ ನೋಟುಗಳನ್ನು ರಕ್ಷಿಸಿ ನೋಟುಗಳು ಒದ್ದೆಯಾಗದಂತೆ ನೋಡಿಕೊಳ್ಳಬೇಕು. ಹರಿದ ನೋಟುಗಳನ್ನು ತಮಗೆ ಹತ್ತಿರವಾದಂತಹ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಬಹುದು.

Leave a Comment

Your email address will not be published. Required fields are marked *

Scroll to Top